ಮೂರು ವರ್ಷದ ಎಲ್ಎಲ್.ಬಿ., ಪದವಿ ಕೋರ್ಸ್ (ಸೆಮಿಸ್ಟರ್ ಕೋರ್ಸ್)
ಕಾರ್ಯಕ್ರಮಗಳು ಮತ್ತು ಸುದ್ದಿ

   ಪ್ರವೇಶ

ಮೂರು ವರ್ಷದ ಎಲ್ಎಲ್.ಬಿ., (ಸೆಮಿಸ್ಟರ್ ಕೋರ್ಸ್) ಗೆ, ಪ್ರವೇಶವು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿ, ಇದರ ನಿಯಮಗಳು, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ಕಾಲೇಜು /ಆಡಳಿತ ಮಂಡಳಿಯ ನಿಯಮಗಳಿಗೆ ಒಳಪಟ್ಟಿರುತ್ತದೆ.

   ಕೋರ್ಸ್ ಅವಧಿ

ಕಾನೂನಿನಲ್ಲಿ ಬ್ಯಾಚುಲರ್ ಪದವಿ (ಎಲ್ಎಲ್.ಬಿ.,)ಯ ಕೋರ್ಸ್ ಅವಧಿಯು ಮೂರು ಶೈಕ್ಷಣಿಕ ವರ್ಷವಾಗಿದೆ. ಪ್ರತಿ ಶೈಕ್ಷಣಿಕ ವರ್ಷವು 2 ಸೆಮಿಸ್ಟರ್‍ಗಳನ್ನು ಒಳಗೊಂಡಿದೆ, ಪ್ರತಿ ಸೆಮಿಸ್ಟರ್ 16+2 ವಾರಗಳು ಒಳಗೊಂಡಿರುತ್ತದೆ.

ಮೂರು ವರ್ಷದ ಎಲ್ಎಲ್.ಬಿ., ಪದವಿ ಕೋರ್ಸ್ ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿ, ಎಲ್ಎಲ್.ಬಿ., ಕಾನೂನು ಪದವಿಗೆ ಅರ್ಹರಾಗಿರುತ್ತಾರೆ, ಕಾನೂನು ಪದವಿಯನ್ನು ಗರಿಷ್ಠ ಅವಧಿಯ 3+3=6 ವರ್ಷದ ಕಾಲಾವದಿಯಲ್ಲಿ ಪಡೆಯುವುದು. ವಿಷಯ ಮತ್ತು ಪಠ್ಯಕ್ರಮವನ್ನು ಪ್ರವೇಶದ ನಂತರ ನೀಡಲಾಗುತ್ತದೆ/ ಕಾಲೇಜಿನ ಅಂತರ್ಜಾಲದಲ್ಲಿ ಲಭ್ಯವಿರುವುದು.


ಮೂರು ವರ್ಷದ ಕಾನೂನು ಪದವಿ ಪಠ್ಯಕ್ರಮ

   ಮೊದಲನೇ ಸೆಮಿಸ್ಟರ್
1. ಸಂವಿಧಾನಿಕ ಕಾನೂನು-I
2. ಕರಾರು ಅಧಿನಿಯಮ- I
3. ಅಪಕೃತ್ಯ ಕಾನೂನು
4. ಕೌಟುಂಬಿಕ ಕಾನೂನು- I (ಹಿಂದೂ ಕಾನೂನು)
5. ಅಪರಾಧಿಕ ಕಾನೂನು - I ಭಾರತೀಯ ದಂಡ ಸಂಹಿತೆ)
6. ಇಂಗ್ಲೀಷ್ (ಕನ್ನಡದಲ್ಲಿ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಮಾತ್ರ)

   ಎರಡನೇ ಸೆಮಿಸ್ಟರ್
1. ಸಂವಿಧಾನಿಕ ಕಾನೂನು-II
2. ಕರಾರು ಅಧಿನಿಯಮ- II
3. ಕಾರ್ಮಿಕ ಕಾನೂನು -I
4. ಸ್ವತ್ತು ಹಸ್ತಾಂತರ ಅಧಿನಿಯಮ
5. ಕೌಟುಂಬಿಕ ಕಾನೂನು - II (ಮಹಮ್ಮದೀಯ ಕಾನೂನು ಮತ್ತು ಭಾರತೀಯ ಉತ್ತರಾಧಿಕಾರ ಅಧಿನಿಯಮ)
6. I.ಕನ್ನಡ
  II. ಕನ್ನಡ ಕಲಿ- (ಕನ್ನಡ ಭಾಷೆಯಾಗಿ ಅಧ್ಯಯನ ಮಾಡದವರಿಗೆ )

   ಮೂರನೇ ಸೆಮಿಸ್ಟರ್
1. ನ್ಯಾಯ ಶಾಸ್ತ್ರ
2. ಕಾರ್ಮಿಕ ಕಾನೂನು- II
3. ತೆರಿಗೆ ಕಾನೂನು
4. ಅಪರಾಧಿಕ ಕಾನೂನು - II (ಅಪರಾಧಿಕ ಪ್ರಕ್ರಿಯಾ ಸಂಹಿತೆ)
5. ಆಡಳಿತ ಕಾನೂನು

   ನಾಲ್ಕನೇ ಸೆಮಿಸ್ಟರ್
1. ಅಂತರರಾಷ್ಟ್ರೀಯ ಕಾನೂನು
2. ಐಚ್ಛಿಕ- I: ಮಾನವ ಹಕ್ಕುಗಳು ಕಾನೂನು ಮತ್ತು ಆಚರಣೆ / ವಿಮಾ ಕಾನೂನು
3. ಐಚ್ಛಿಕ – II: ಬ್ಯಾಂಕಿಂಗ್ ಕಾನೂನು/ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ
4. ಪ್ರಾಯೋಗಿಕ ವಿಷಯ- I: ವೃತ್ತಿಪರ ನೀತಿಗಳು ಮತ್ತು ವೃತ್ತಿಪರ ಲೆಕ್ಕಪತ್ರ ವ್ಯವಸ್ಥೆ
5. ಪ್ರಾಯೋಗಿಕ ವಿಷಯ- II: ಪರ್ಯಾಯ ವಿವಾದ ಇತ್ಯರ್ಥ ವ್ಯವಸ್ಥೆ.

   ಐದನೇ ಸೆಮಿಸ್ಟರ್
1. ಕಂಪನಿ ಕಾನೂನು
2. ದಿವಾನಿ ಪ್ರಕ್ರಿಯಾ ಸಂಹಿತೆ ಮತ್ತು ಕಾಲಮಿತಿ ಅಧಿನಿಯಮ
3. ಐಚ್ಛಿಕ -3: ಭೌದ್ದಿಕ ಸ್ವತ್ತಿನ ಹಕ್ಕುಗಳು- I ದಂಡ ಶಾಸ್ತ್ರ ಮತ್ತು ಬಲಿಪಶು ಶಾಸ್ತ್ರ
4. ಐಚ್ಛಿಕ -ಶಾಸನಗಳ ನಿರ್ವಚನ ಮತ್ತು ಶಾಸನ ತತ್ವಗಳು/ ಸ್ಪರ್ಧಾ ಕಾನೂನು
5. ಪ್ರಾಯೋಗಿಕ ವಿಷಯ- III :- ವಾದ/ಪ್ರತಿವಾದ ಹಾಗೂ ಹಸ್ತಾಂತರ ದಸ್ತಾವೇಜುಗಳ ಕರಡು ರಚನೆ

   ಆರನೇ ಸೆಮಿಸ್ಟರ್
1. ಸಾಕ್ಷಿ ಅಧಿನಿಯಮ
2. ಪರಿಸರ ಕಾನೂನು
3. ಐಚ್ಛಿಕ - IV ಬೌದ್ದಿಕ ಸ್ವತ್ತಿನ ಹಕ್ಕುಗಳು-2/ ಶ್ವೇತ ವರ್ಣಿಕ ಅಪರಾಧಗಳು
4. ಐಚ್ಛಿಕ - V : ಭೂ ಕಾನೂನುಗಳು/ ಅಂತರರಾಷ್ಟ್ರೀಯ ವ್ಯವಹಾರ ಮತ್ತು ವಾಣಿಜ್ಯ
5. ಪ್ರಾಯೋಗಿಕ- IV -ಪ್ರಾಕೃತ ಕಲ್ಪಿತ ನ್ಯಾಯಾಲಯ ಆಚರಣೆ ಮತ್ತು ಅಂತರ್ಗತ ಅಧ್ಯಯನ

ತ್ವರಿತ ಲಿಂಕ್‍ಗಳು
ಮುಖಪುಟ
ರಾಷ್ಟ್ರೀಯ ಕಾನೂನು ಕಾಲೇಜಿನ ಬಗ್ಗೆ
ಆಡಳಿತ
ಲಭ್ಯವಿರುವ ಕೋರ್ಸ್‍ಗಳು
ಪ್ರವೇಶಾತಿ
ಸಿಬ್ಬಂದಿ
ಸೌಲಭ್ಯಗಳು
ಗ್ರಂಥಾಲಯ
ಚಿತ್ರಗಳು
ಪರೀಕ್ಷೆ ಮತ್ತು ಫಲಿತಾಂಶಗಳು
ವರದಿಗಳು ಮತ್ತು ಡೌನ್ಲೋಡ್‍ಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ |
ಡೌನ್ಲೋಡ್‍ಗಳು | ನಮ್ಮನ್ನು ಸಂಪರ್ಕಿಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಕೃತಿಸ್ವಾಮ್ಯ © ಸಿ ಬಿ ಆರ್‍ ಎನ್‍ ಸಿ ಎಲ್