ಸಿ. ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಶಿವಮೊಗ್ಗಕ್ಕೆ ಸ್ವಾಗತ…!
ಕಾರ್ಯಕ್ರಮಗಳು ಮತ್ತು ಸುದ್ದಿ

    ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಶಿವಮೊಗ್ಗವು 1966 ರಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ.(ರಿ.), ಶಿವಮೊಗ್ಗದ ಆಶ್ರಯದಲ್ಲಿ ಸ್ಥಾಪಿಸಲಾಗಿದೆ. ಈ ಮಹಾವಿದ್ಯಾಲಯವು ಭಾರತ ವಕೀಲ ಮಂಡಳಿ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ಸಂಯೋಜನೆಗೆ ಒಳಪಟ್ಟಿರುತ್ತದೆ. 2001 ರಲ್ಲಿ ಯುಜಿಸಿಯ ನ್ಯಾಕ್ ಸಂಸ್ಥೆಯಿಂದ ಮಾನ್ಯತೆಗೆ ಒಳಪಟ್ಟ ದೇಶದ ಮೊದಲ ಕಾನೂನು ಕಾಲೇಜು. ತನ್ನದೇ ಸ್ವಂತ ಕಟ್ಟಡ ಹೊಂದಿದ ಮಹಾವಿದ್ಯಾಲಯವು ಸುಸಜ್ಚಿತ ಕಛೇರಿ, ಕ್ರೀಡಾವಿಭಾಗ, ವಾಚನಾಲಯ, ಉಪನ್ಯಾಸಕರ ಕೊಠಡಿಗಳು, ಸಭಾಂಗಣ, ಗಣಕಯಂತ್ರ ಅಂರ್ತಜಾಲ ವ್ಯವಸ್ಥಿತ ಪ್ರಯೋಗಾಲಯ, ವ್ಯಾಯಾಮಶಾಲೆ, ಪ್ರಾಯೋಗಿಕ ತರಬೇತಿ (ಮೂಟ್‍ಕೋರ್ಟ್) ಕೊಠಡಿಯನ್ನು ಹೊಂದಿರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ 1991ರಲ್ಲಿ ಮಹಾವಿದ್ಯಾಲಯವು ಅನುದಾನಕೊಳ್ಳಪಟ್ಟಿರುತ್ತದೆ. ಪ್ರಾರಂಭದಲ್ಲಿ ಎರಡು ವರ್ಷದ, ತದನಂತರ 1994 ರವರೆಗೆ 3 ವರ್ಷದ ಕಾನೂನು ಶಿಕ್ಷಣ ನೀಡುತ್ತಿದ್ದ ಮಹಾವಿದ್ಯಾಲಯವು 1994ರಿಂದ 5 ವರ್ಷದ ಕಾನೂನು ಶಿಕ್ಷಣ ನೀಡುತ್ತಿದೆ.

ಮಹಾವಿದ್ಯಾಲಯವು ಶೇಕಡ 45 ಅಂಕಗಳಿಸಿದ ಪದವೀದರರಿಗೆ 3 ವರ್ಷದ ಕಾನೂನು ಪದವಿ ಮತ್ತು 10+2 /ಪಿಯುಸಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ 5 ವರ್ಷದ ಕಾನೂನು ಪದವಿಯನ್ನು ಒದಗಿಸುತ್ತದೆ. ಮಹಾವಿದ್ಯಾಲಯವು 2004-05 ನೇ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಕಾನೂನು ಹಾಗೂ ಸಂಶೋಧನಾ ಕೇಂದ್ರವನ್ನು ಪ್ರಾರಂಬಿಸಿದ್ದು, 2009-10 ನೇ ಶೈಕ್ಷಣಿಕ ಅವಧಿಯಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಇದರ ಸಂಯೋಜನೆಯೊಂದಿಗೆ ಸ್ನಾತಕೋತ್ತರ ಸಂವಿಧಾನ ಕಾನೂನು ಪದವಿಯನ್ನು ಪ್ರಾರಂಭಿಸಲಾಗಿದೆ. ಪೂರ್ಣಸಿಬ್ಬಂದಿ ಹೊಂದಿದ ಮಹಾವಿದ್ಯಾಲಯವು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಕಾನೂನು ಇತರೆ ಸ್ನಾತಕೋತ್ತರ ಪದವಿಯನ್ನು ಹಾಗೂ ಡಾಕ್ಟರೇಟ್ ಪಡೆದ ನುರಿತ ಶಿಕ್ಷಕರನ್ನು ಹೊಂದಿದೆ.

ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯವು ಕೇವಲ ವಿದ್ಯಾರ್ಥಿಗಳಿಗೆ ಕಾನೂನು ಜ್ಞಾನ ಒದಗಿಸುವುದಕ್ಕಷ್ಟೆ ಸೀಮಿತವಾಗದೇ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಉಚಿತ ಕಾನೂನು ಸೇವಾ ಹಾಗೂ ಸಲಹಾ ಕಾರ್ಯಕ್ರಮಗಳನ್ನು ಸತತವಾಗಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಡಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಸಕ್ರಿಯವಾಗಿ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಮತ್ತು ಶೈಕ್ಷಣಿಕ ಸ್ಪರ್ಧೆಗಳಲ್ಲಿ ಪ್ರತಿನಿದಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಶೈಕ್ಷಣಿಕವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಿಶೇಷ ಉಪನ್ಯಾಸ, ಸಮ್ಮೇಳನ, ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. 2016ರಲ್ಲಿ ನ್ಯಾಕ್ ಸಂಸ್ಥೆಯಿಂದ `ಬಿ’+ ಶ್ರೇಣಿಯ ಮಾನ್ಯತೆ ಪಡೆದಿರುತ್ತದೆ.

ಮಹಾವಿದ್ಯಾಲಯವು ಸಾವಿರಾರು ವಕೀಲರು ಹಾಗೂ ನ್ಯಾಯಾಧೀಶರನ್ನು ಹಿರಿಯವಿದ್ಯಾರ್ಥಿಗಳಾಗಿ ಕೊಡುಗೆಯನ್ನು ನೀಡಿದಲ್ಲದೆ, ನಾಡಿಗೆ ಕಾನೂನು ಜ್ಞಾನವನ್ನು ಪಸರಿಸುತ್ತಾ ಸುವರ್ಣ ವರ್ಷವನ್ನು 2016 ರಲ್ಲಿ ಕ್ರಮಿಸಿದೆ.

ಪ್ರೊ.ಡಾ.ಜಿ.ಆರ್ ಜಗದೀಶ್, ಬಿ.ಎಸ್‍ಸಿ.ಎಲ್‍ಎಲ್.ಎಮ್, ಪಿಹೆಚ್‍ಡಿ,
ಪ್ರಾದ್ಯಾಪಕರು ಮತ್ತು ಪ್ರಾಂಶುಪಾಲರು

ತ್ವರಿತ ಲಿಂಕ್‍ಗಳು
ಮುಖಪುಟ
ರಾಷ್ಟ್ರೀಯ ಕಾನೂನು ಕಾಲೇಜಿನ ಬಗ್ಗೆ
ಆಡಳಿತ
ಲಭ್ಯವಿರುವ ಕೋರ್ಸ್‍ಗಳು
ಪ್ರವೇಶಾತಿ
ಸಿಬ್ಬಂದಿ
ಸೌಲಭ್ಯಗಳು
ಗ್ರಂಥಾಲಯ
ಚಿತ್ರಗಳು
ಪರೀಕ್ಷೆ ಮತ್ತು ಫಲಿತಾಂಶಗಳು
ವರದಿಗಳು ಮತ್ತು ಡೌನ್ಲೋಡ್‍ಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ |
ಡೌನ್ಲೋಡ್‍ಗಳು | ನಮ್ಮನ್ನು ಸಂಪರ್ಕಿಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಕೃತಿಸ್ವಾಮ್ಯ © ಸಿ ಬಿ ಆರ್‍ ಎನ್‍ ಸಿ ಎಲ್