ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ
ಕಾರ್ಯಕ್ರಮಗಳು ಮತ್ತು ಸುದ್ದಿ

   ಪೀಠಿಕೆ
ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜು, ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು 1966 ರಲ್ಲಿ ಪ್ರಾರಂಭವಾಯಿತು. ಅದೇ ರೀತಿ ನಮ್ಮ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವು ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಗ್ರಂಥಾಲಯವಾಗಿದೆ. ನಮ್ಮ ಗ್ರಂಥಾಲಯದಲ್ಲಿ ಪಠ್ಯಪುಸ್ತಕಗಳು, ಪರಮಾರ್ಶನ ಪುಸ್ತಕಗಳು, ಕಾನೂನು ವರದಿಗಳು, ಜರ್ನಲ್‍ಗಳು, ಸಾಮಾನ್ಯ ಜ್ಞಾನದ ಪುಸ್ತಕಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಕ್ರ.ಸಂ ಸಂಗ್ರಹಣೆಗಳು ಸಂಖ್ಯೆಗಳು
1 ಪಠ್ಯಪುಸ್ತಕಗಳು 23164
2 ಪರಾಮರ್ಶನ ಪುಸ್ತಕಗಳು 8650
3 ಎರವಲು ಪುಸ್ತಕಗಳು 14514
4 ಅಂತರ್ಜಾಲ ಪುಸ್ತಕಗಳು 1
5 ಜರ್ನಲ್ಸ್ 95
6 ಇ-ಜರ್ನಲ್ಸ್ 18
7 ಡಿಜಿಟಲ್ ಡಾಟಬೇಸ್ 1
8 ಸಿ.ಡಿ ಡಿವಿಡಿಗಳು 33
9 ಹಿಂದಿನ ಸಂಪುಟಗಳು (Back Volumes) 3,022

   ಬಳಕೆದಾರರು
   ವಿದ್ಯಾರ್ಥಿಗಳ ಸದಸ್ಯತ್ವ:-
ಪ್ರಸ್ತುತ ವರ್ಷದಲ್ಲಿ ದಾಖಲಾತಿಯನ್ನು ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಸದಸ್ಯತ್ವವನ್ನು ನೀಡಲಾಗುತ್ತದೆ.

   ಉಪನ್ಯಾಸಕರ ಸದಸ್ಯತ್ವ:-
ಪೂರ್ಣಕಾಲಿಕ ಮತ್ತು ಅರೆಕಾಲಿಕ ಉಪನ್ಯಾಸಕರುಗಳಿಗೆ ಗ್ರಂಥಾಲಯದಲ್ಲಿ ಸದಸ್ಯತ್ವವನ್ನು ನೀಡಲಾಗುತ್ತದೆ.

   ಸಂಶೋಧನಾ ವಿದ್ಯಾರ್ಥಿಗಳಿಗೆ ಸದಸ್ಯತ್ವ:-
ಸಂಶೋಧನೆಯನ್ನು ಮಾಡಲು ನೊಂದಾಯಿತ ವಿದ್ಯಾರ್ಥಿಗಳಿಗೆ (ಪಿ.ಹೆಚ್.ಡಿ.,) ಸದಸ್ಯತ್ವವನ್ನು ನೀಡಲಾಗುತ್ತದೆ.

   ಆಡಳಿತಾತ್ಮಕ ಸದಸ್ಯತ್ವ:-
ಆಡಳಿತಾತ್ಮಕ ಸದಸ್ಯರುಗಳಿಗೆ ಸಂಬಂಧಿಸಿದಂತೆ ಗ್ರಂಥಾಲಯದಲ್ಲಿ ಓದಲು ಹಾಗೂ ಸದಸ್ಯತ್ವವನ್ನು ಕಲ್ಪಿಸಲಾಗಿದೆ.

   ಮ್ಯಾನೇಜ್‍ಮೆಂಟ್ ಸದಸ್ಯರ ಸದಸ್ಯತ್ವ:-
ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಲ್ಲಾ ಮ್ಯಾನೇಜ್‍ಮೆಂಟ್ ಸದಸ್ಯರಿಗೆ ಸದಸ್ಯತ್ವದ ಅವಕಾಶವನ್ನು ಕಲ್ಪಿಸಲಾಗಿದೆ.


   ಸೇವೆ ಮತ್ತು ಸೌಲಭ್ಯಗಳು
   1. ಎರವಲು ಸೌಲಭ್ಯಗಳು:-
ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿ 15 ದಿನಗಳಂತೆ ಪುಸ್ತಕಗಳನ್ನು ಎರವಲಾಗಿ ನೀಡಲಾಗುತ್ತಿದೆ. ಹಾಗೂ ಉಪನ್ಯಾಸಕರುಗಳಿಗೆ ಸೆಮಿಷ್ಟರ್ ಅವಧಿಗೆ ಪುಸ್ತಕಗಳನ್ನು ಎರವಲಾಗಿ ನೀಡಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ನಿಗಧಿತ ಅವಧಿಯೊಳಗೆ ಪುಸ್ತಕಗಳನ್ನು ವಾಪಸಾತಿ ಮಾಡದೇ ಹೋದರೆ ದಿನ ಒಂದಕ್ಕೆ 1 ರೂ. ನಂತೆ ದಂಡ ಶುಲ್ಕವನ್ನು ವಿಧಿಸಲಾಗುತ್ತದೆ.

   2.OPAC ಸೌಲಭ್ಯಗಳು:-
ಪುಸ್ತಕಗಳನ್ನು ಯಾವ ರ್ಯಾಕ್‍ನಲ್ಲಿ ಸಂಗ್ರಹಿಸಲಾಗಿದೆ ಎಂಬುದನ್ನು ತಿಳಿಯಲು ವಿದ್ಯುನ್ಮಾನ ತಂತ್ರಾಂಶದಲ್ಲಿ (ಇ-ಐib) ಹುಡುಕಲು ಸಹಾಯಕವಾಗಿದೆ.

   3. PHOTOSTAT (ಛಾಯಪ್ರತಿ) ಸೌಲಭ್ಯಗಳು:-
ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಆಡಳಿತಾತ್ಮಕ ಕೆಲಸಗಳಿಗೆ ಅನುಕೂಲವಾಗಲು ಛಾಯಪ್ರತಿ ಸೌಲಭ್ಯ ಒದಗಿಸಲಾಗಿದೆ.

   4. ಮೆರಿಟ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪುಸ್ತಕ ಸೌಲಭ್ಯಗಳು:-
ಪ್ರತಿ ಸೆಮಿಷ್ಟರ್ ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಹಾಗೂ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಎರವಲು ಪುಸ್ತಕಗಳ ಜೊತೆಗೆ 3 ಪುಸ್ತಕಗಳನ್ನು ಹೆಚ್ಚಿನದಾಗಿ ನೀಡಲಾಗುತ್ತದೆ.

   ಹೊಸ ಪುಸ್ತಕಗಳ ಪ್ರದರ್ಶನ:- (NEW ARRIVAL DISPLAY)
ಗ್ರಂಥಾಲಯಕ್ಕೆ ಹೊಸದಾಗಿ ಬಂದ ಪುಸ್ತಕಗಳು ಹಾಗೂ ಸೆಮಿಸ್ಟರ್‍ಗೆ ಬರುವ ಎಲ್ಲಾ ಪುಸ್ತಕಗಳನ್ನು ಪ್ರದರ್ಶಿಸಲಾಗುವುದು.

    ಪರಮಾರ್ಶನ ಸೌಲಭ್ಯಗಳು:-
ವಾಚಾನಾಲಯದಲ್ಲಿ ಪಠ್ಯ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನದ ಪುಸ್ತಕಗಳು ಹಿಂದಿನ ಸಂಪುಟಗಳು (Back Volumes) ಸೇವೆಯನ್ನು ಒದಗಿಸಲಾಗುವುದು.

    ಓರಿಯಂಟೇಶನ್ ಕಾರ್ಯಕ್ರಮ:-
ಪ್ರತಿವರ್ಷವು ಸಹ ನಮ್ಮ ಕಾಲೇಜು ಪ್ರಾರಂಭವಾಗು ಸಮಯದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಲಾಗುವುದು.

    ಗ್ರಂಥಾಲಯ ಸಮಯ:-
ಗ್ರಂಥಾಲಯ ಸಮಯವು ಪ್ರತಿದಿನ ಬೆಳಿಗ್ಗೆ 09-00 ರಿಂದ ಸಂಜೆ 05-00 ಘಂಟೆಯವರೆಗೆ ತೆರೆದಿರುತ್ತದೆ. ಹಾಗೂ ಶನಿವಾರದಂದು ಬೆಳಿಗ್ಗೆ 09-00 ರಿಂದ ಮಧ್ಯಾಹ್ನ 02.-00 ಘಂಟೆಯವರಿಗೆ ತೆರೆದಿರುತ್ತದೆ.

   ಗಣಕೀಕೃತ ಗ್ರಂಥಾಲಯ ಸೌಲಭ್ಯ:-
ನಮ್ಮ ಗ್ರಂಥಾಲಯವನ್ನು ಇ-ಲಿಬ್ ತಂತ್ರಾಂಶದಲ್ಲಿ ಒಳಪಡಿಸಲಾಗಿದೆ. ಇದರಿಂದ ಪುಸ್ತಕಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪುಸ್ತಕಗಳನ್ನು ವಿತರಿಸಲು ಸಹಾಯಕವಾಗಿದೆ.


ತ್ವರಿತ ಲಿಂಕ್‍ಗಳು
ಮುಖಪುಟ
ರಾಷ್ಟ್ರೀಯ ಕಾನೂನು ಕಾಲೇಜಿನ ಬಗ್ಗೆ
ಆಡಳಿತ
ಲಭ್ಯವಿರುವ ಕೋರ್ಸ್‍ಗಳು
ಪ್ರವೇಶಾತಿ
ಸಿಬ್ಬಂದಿ
ಸೌಲಭ್ಯಗಳು
ಗ್ರಂಥಾಲಯ
ಚಿತ್ರಗಳು
ಪರೀಕ್ಷೆ ಮತ್ತು ಫಲಿತಾಂಶಗಳು
ವರದಿಗಳು ಮತ್ತು ಡೌನ್ಲೋಡ್‍ಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ |
ಡೌನ್ಲೋಡ್‍ಗಳು | ನಮ್ಮನ್ನು ಸಂಪರ್ಕಿಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಕೃತಿಸ್ವಾಮ್ಯ © ಸಿ ಬಿ ಆರ್‍ ಎನ್‍ ಸಿ ಎಲ್