ಲಭ್ಯವಿರುವ ಸೌಲಭ್ಯಗಳು
ಕಾರ್ಯಕ್ರಮಗಳು ಮತ್ತು ಸುದ್ದಿ

   ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ

ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜು, ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು 1966 ರಲ್ಲಿ ಪ್ರಾರಂಭವಾಯಿತು. ಅದೇ ರೀತಿ ನಮ್ಮ ಕಾಲೇಜಿನ ಗ್ರಂಥಾಲಯವು ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಗ್ರಂಥಾಲಯವಾಗಿದೆ. ನಮ್ಮ ಗ್ರಂಥಾಲಯದಲ್ಲಿ ಪಠ್ಯಪುಸ್ತಕಗಳು, ಪರಮಾರ್ಶನ ಪುಸ್ತಕಗಳು, ಕಾನೂನು ವರದಿಗಳು, ಜರ್ನಲ್‍ಗಳು, ಸಾಮಾನ್ಯ ಜ್ಞಾನದ ಪುಸ್ತಕಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ..... [ಹೆಚ್ಚಿನ ಓದು]

   ಕಂಪ್ಯೂಟರ್ ಮತ್ತು ನೆಟ್ವರ್ಕಿಂಗ್ ಲ್ಯಾಬ್

ಕಾಲೇಜು ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಅನ್ನು ಒದಗಿಸಲಾಗಿದೆ. ಇದು ನೆಟ್ವರ್ಕ್ ಲ್ಯಾಬ್ನೊಂದಿಗೆ ಹಲವಾರು ಕಂಪ್ಯೂಟರ್ಗಳನ್ನು ಹೊಂದಿದೆ. ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಫ್ಯಾಕಲ್ಟಿ ಮತ್ತು ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ UGC - Infonet ಆಧಾರಿತ NLIST ಮೂಲಕ ಆನ್-ಲೈನ್ ಸಂಪನ್ಮೂಲಗಳನ್ನು ಪ್ರವೇಶಿಸಬಹುದು ಮತ್ತು ಕನಿಷ್ಠ ವೆಚ್ಚದಲ್ಲಿ ಮುದ್ರಣಗಳನ್ನು ಡೌನ್ಲೋಡ್ ಮಾಡಿ ಮತ್ತು ತೆಗೆದುಕೊಳ್ಳಬಹುದು.

   ಮೂಟ್ ಕೋರ್ಟ್ ಹಾಲ್
ಕಾಲೇಜಿನಲ್ಲಿ ಸುಸಜ್ಜಿತವಾದ ಮೂಟ್ ಕೋರ್ಟ್ ಹಾಲ್ ಅನ್ನು ಸ್ಥಾಪಿಸಲಾಗಿದೆ.

   ದೈಹಿಕ ಶಿಕ್ಷಣ ವಿಭಾಗ - “ಸಧೃಡ ದೇಹದಲ್ಲಿ ಸಧೃಡ ಮನಸ್ಸು”

ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವೋತ್ತೋಮುಖ ಬೆಳವಣಿಗೆ ಸಹಕರಿಸುವ ಸಲುವಾಗಿ ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ ಮತ್ತು ಆಟೋಟಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಆಯೋಜಿಸುವ ಎಲ್ಲಾ ಕ್ರೀಡೆಗಳಿಗೂ ನಮ್ಮ ಕಾಲೇಜಿನ ತಂಡಗಳು ಭಾಗವಹಿಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ಅಂತರ್‍ವಿಶ್ವವಿದ್ಯಾನಿಲಯಗಳ ಕ್ರೀಡೆಗಳಲ್ಲಿ ಭಾಗವಹಿಸಿದರೆ ಕಾಲೇಜಿನಿಂದ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿದೆ. ಇದರ ಸದುಪಯೋಗವನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ.

ಹಾಗೆಯೆ ನಮ್ಮ ಕಾಲೇಜು ವಿಶಾಲವಾದ ಆಟದ ಮೈದಾನವನ್ನು ಹೊಂದಿದ್ದು ಅದರಲ್ಲಿ ಫುಟ್‍ಬಾಲ್, ಕಬ್ಬಡಿ ಕ್ರಿಕೇಟ್, ಹಾಕಿ, ವಾಲಿಬಾಲ್, ಥ್ರೋಬಾಲ್, ಮತ್ತು ಖೋಖೋ ಅಂಕಣವನ್ನು ನಿರ್ಮಿಸಲಾಗಿದೆ. ಅದರಂತೆ ಒಳಾಂಗಣ ಕ್ರೀಡಾಂಗಣವು ಸಹ ಹೊಂದಿದ್ದು ಇದರಲ್ಲಿ ಜೂಡೋ, ಟೇಕ್ವಾಂಡೋ, ಕುಸ್ತಿ ಮತ್ತು ಟೇಬಲ್ ಟೆನ್ನಿಸ್ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕಾಲೇಜಿನಲ್ಲಿ ಸುಸರ್ಜಿತವಾದ ಮಲ್ಟಿಜಿಮ್ ಮತ್ತು ಹೆಚ್ಚು ಸುರಕ್ಷಿತ ಹಾಗೂ ಅಡ್ವಾನ್ಸ್ ವಿವಿಧ ಜಿಮ್ ಪರಿಕರಗಳನ್ನು ಹೊಂದಿರುತ್ತದೆ.

   ರಾಷ್ಟ್ರೀಯ ಸೇವಾ ಯೋಜನೆ

ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಪ್ರತಿ ವರ್ಷ 100 ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಳ್ಳುತ್ತಿದ್ದು, ಅವರಿಗೆ 2 ವರ್ಷದ ನಂತರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಎನ್.ಎಸ್.ಎಸ್ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಎನ್.ಎಸ್.ಎಸ್. ಎಂದರೆ ‘ನಾನು ಸದಾ ಸಿದ್ಧ’ ಅಥವಾ ‘ನಾನು ಶಿಸ್ತಿನ ಸಿಪಾಯಿ’ ಎಂದು ಅರ್ಥೈಸಬಹುದು. ‘ಎನ್.ಎಸ್.ಎಸ್.ನವರು ದೇಶ ಕಟ್ಟುತ್ತಾರೆ’. ‘ಎನ್.ಸಿ.ಸಿ.ಯವರು ದೇಶವನ್ನು ರಕ್ಷಿಸುತ್ತಾರೆ. ಎನ್.ಎಸ್.ಎಸ್.ನವರದದು ‘ಕಟ್ಟುವ ಮತ್ತು ಮೆತ್ತುವ ಕೆಲಸ’. ಇದರಿಂದ ಶ್ರಮದ ಮಹತ್ವ [Dignity of Labor] ವಿದ್ಯಾರ್ಥಿಗಳಿಗೆ ತಿಳಿಯುತ್ತದೆ.

ಧ್ಯೇಯ ವಾಕ್ಯ ನನಗಲ್ಲ, ನಿನಗೆ - Not me, but you ಆಗಿದೆ.

ಪ್ರಜಾಪ್ರಭುತ್ವ ದೇಶದಲ್ಲಿ ಬದುಕುನ ಹಾಗೇನೆ ನಿಸ್ವಾರ್ಥ ಸೇವೆಯಲ್ಲಿ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಮೆಚ್ಚಿಕೆಯಾಗಿ ಗುರುತಿಸಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಎನ್.ಎಸ್.ಎಸ್. ದ್ಯೇಯ ವಾಕ್ಯ ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆ (National Service Scheme) ಎನ್ನುವುದು ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ನಡೆಸುವವರು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (Department of Youth Affairs and Sports). ಗಾಂಧೀಜಿಯವರ ಶತವರ್ಷವಾದ ೧೯೬೯ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವ್ಸವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ತ್ರನಿರ್ಮಾಣದ ಕಾರ್ಯಗಳಲ್ಲಿ ಒಳಗೊಂದಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ.

ರಾಷ್ಟ್ರೀಯ ಸೇವಾ ಯೋಜನೆ ಈ ಸಂಘಟನೆಯನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಬಗೆಯಲ್ಲಿ ತಿಳಿಯಲು ಇರುವು ಒಂದು ಸರಕಾರದ ಯೋಜನೆ. ಗಾಂಧೀಜಿ ಯವರ ಸರ್ವೋದಯತತ್ವದ ನೆಲೆಯಲ್ಲಿ ಯೋಚನೆ ಮಾಡುವಾಗ, ಇಂತಹ ಒಂದು ವಿಚಾವರನ್ನು ಅನುಷ್ಠಾನಕ್ಕೆ ತಂದರು. ಹೀಗೆ ಎನ್.ಎಸ್.ಎಸ್. ಎಂಬ ಪರಿಕಲ್ಪನೆ ಬಂತು. ಮೊದಲು ಪದವಿ ಕಾಲೇಜುಗಳಲ್ಲಿ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಇದ್ದ ಎನ್.ಎಸ್.ಎಸ್.ನಂತರ ಪಿ.ಯು.ಸಿ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಯಿತು.

ಉದ್ದೇಶ:- ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ. ಶ್ರಮದಾನ. ಪ್ರಗತಿಪರ ಚಿಂತನೆ. ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ. ಶೈಕ್ಷಣಿಕಮತ್ತು ಸಾಂಸ್ಕೃತಿಕ ಚಟುವಟಿಕೆಗಳು. ಮಕ್ಕಳು ಮತ್ತು ಮಹಿಳಾ ಜಾಗೃತಿ ಪ್ರಾಚ್ಯವಸ್ತುಗಳ ಸಂರಕ್ಷಣೆ. ರಾಷ್ಟ್ರೀಯ ಜಾಗೃತಿ ಮೂಡಿಸುವುದು

    ರೆಡ್‍ಕ್ರಾಸ್:-
ರೆಡ್‍ಕ್ರಾಸ್ ಘಟಕವು ನಮ್ಮ ಕಾಲೇಜಿನಲ್ಲಿ 2015 ರಿಂದ ಪ್ರಾರಂಭವಾಗಿದ್ದು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಪ್ರಮುಖವಾಗಿ ಪ್ರತಿವರ್ಷ ವಿದ್ಯಾರ್ಥಿಗಳಿಂದ ರಕ್ತದಾನ ಶಿಭಿರವನ್ನು ವಿವಿಧ ಸಂಘ-ಸಂಸ್ಥೆಗಳೊಂದಿಗೆ ಆಯೋಜಿಸಿ ರಕ್ತದಾನ ಮಾಡಿ ರಕ್ತನಿಧಿಗೆ ನೀಡುತ್ತೇವೆ. ಹಾಗೆಯೇ ವಿವಿದ ಬಗೆಯ ಪ್ರಾಕೃತಿಕ ವಿಕೋಪಗಳ ಬಗ್ಗೆ ತಿಳಿವಳಿಕೆ ನೀಡುವುದಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ತ್ವರಿತ ಲಿಂಕ್‍ಗಳು
ಮುಖಪುಟ
ರಾಷ್ಟ್ರೀಯ ಕಾನೂನು ಕಾಲೇಜಿನ ಬಗ್ಗೆ
ಆಡಳಿತ
ಲಭ್ಯವಿರುವ ಕೋರ್ಸ್‍ಗಳು
ಪ್ರವೇಶಾತಿ
ಸಿಬ್ಬಂದಿ
ಸೌಲಭ್ಯಗಳು
ಗ್ರಂಥಾಲಯ
ಚಿತ್ರಗಳು
ಪರೀಕ್ಷೆ ಮತ್ತು ಫಲಿತಾಂಶಗಳು
ವರದಿಗಳು ಮತ್ತು ಡೌನ್ಲೋಡ್‍ಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ |
ಡೌನ್ಲೋಡ್‍ಗಳು | ನಮ್ಮನ್ನು ಸಂಪರ್ಕಿಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಕೃತಿಸ್ವಾಮ್ಯ © ಸಿ ಬಿ ಆರ್‍ ಎನ್‍ ಸಿ ಎಲ್